ನಮಸ್ಕಾರ, ನನ್ನ ಹೆಸರು ಪ್ರವೀಣ್. ನನ್ನ ಮಗ ಪ್ರಣವ್, ಸುಮಾರು 2-3 ವರ್ಷದಿಂದ ಕನ್ನಡ ತರಗತಿ ಗಳನ್ನ ಸುನೈನಾ ಮತ್ತು ವೃಂದ ದವರಿಂದ ತಿಗೆದು ಕೊಳ್ಳುತ್ತಿದ್ದಾರೆ. ನಮಗೆ ಅವನು ಕನ್ನಡದಲ್ಲಿ ಸ್ವಲ್ಪ ಸ್ವಲ್ಪ ಮಾತಾಡಿದಾಗ ತುಂಬಾ ಖುಷಿಯಾಗುತ್ತದೆ. ಈಗ ಅವನು ಕನ್ನಡದಲ್ಲಿ ಸ್ವಲ್ಪ ಸ್ಪಷ್ಟ ವಾಗಿ ಮಾತಾಡುತ್ತಾನೆ ಹಾಗೆ ಬರೆಯಲು ಪ್ರಯತ್ನಿಸುತ್ತಿದ್ದಾನೆ. ಇದೆಲ್ಲಾ ನಮ್ಮ ಕನ್ನಡ ಕಲಿ ತರಗತಿಗಳ ಪ್ರಭಾವ. ತರಗತಿಗಳು ತುಂಬಾ ಚೆನ್ನಾಗಿ ನಿಗದಿತ ರೀತಿಯಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ. ಮಕ್ಕಳ ಇಷ್ಟೆಲ್ಲಾ ಸಾಧನೆಗೆ, ನಾವು ಸುನಯನ ಮತ್ತು ವೃಂದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
-Smitha & Praveen Rao
My two Kids have been attending the Kannada Kali program from close to 1 and half years.
we are very pleased and feel thankful to have got to know about this program. The classes are conducted by volunteered parent teachers who are very motivated and enthusiastic and friendly to teach the kids our mother tongue. My kids have felt interested and motivated to learn the language with the group set up and we are impressed by this. Kids feel more motivated now to speak in Kannada and has helped them to communicate with the grandparents and family back in India. Class offers them good material and structure to follow on and build up the language.
Thanks for the organizers and conductors of this program to have provided a good platform for kids to learn our mother tongue
- Usha & Mahantesh
ಸುನೈನಾ ಮತ್ತು ಕನ್ನಡ ಕಲಿ - ನೋವೈ ತಂಡಕ್ಕೆ ತುಂಬಾ ಧನ್ಯವಾದಗಳು. ನಮ್ಮ ಇಬ್ಬರು ಮಕ್ಕಳು - ತಾನ್ಯ ಮತ್ತು ಅರ್ಜುನ್, ಕಳೆದ ಒಂದು ವರ್ಷದಿಂದ ಇಲ್ಲಿ ಪಾಠ ಕಲೆಯುತ್ತಿದ್ದಾರೆ. ಇಲ್ಲಿನ ಎಲ್ಲಾ ಶಿಕ್ಷಕರು ಅತ್ಯಂತ ಸಮರ್ಪಕವಾಗಿ, ಸ್ನೇಹಪರ ಮತ್ತು ಉತ್ಸಾಹದಿಂದ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಇದ್ದಾರೆ. ಇಲ್ಲಿ ಪ್ರತಿಯೊಂದು ಮಕ್ಕಳಿಗೆ ಪ್ರತ್ಯೇಕವಾಗಿ ಕನ್ನಡ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಕೋವಿಡ್ ಮಹಾಮಾರಿ ಸಮಯದಲ್ಲಿಯೂ ಕೂಡ ಪಾಠ ಹೇಳಿಕೊಡಲಾಗುತ್ತಿದೆ. ಇದು ಅತ್ಯಂತ ಶ್ಲಾಘನೀಯ ಕೆಲಸ. ಕನ್ನಡ ಕಲಿ ಸೇರಿದ ಮೇಲೆ ನಮ್ಮ ಮಕ್ಕಳು ತಮ್ಮ ದಿನ ನಿತ್ಯದ ಸಂಭಾಷಣೆಯಲ್ಲಿ ಉಪಯೋಗಿಸುತ್ತಿದ್ದಾರೆ. ಇದು ನಮಗೆ ಅತ್ಯಂತ ಖುಷಿಯನ್ನು ತಂದಿದೆ. ಕನ್ನಡ ಭಾಷೆಯನ್ನು ಅಮೆರಿಕಾದಲ್ಲಿ ಇರುವ ನಮ್ಮ ಮಕ್ಕಳಿಗೆ ತಲುಪಿಸುತ್ತಿರುವ ಮತ್ತು ನಮ್ಮ ಸಂಸ್ಕೃತಿಯನ್ನು ಮುಂದೆ ತೆಗೆದುಕೊಂಡು ಹೋಗುವ ಈ ತಂಡಕ್ಕೆ ನಮ್ಮ ನಮನ.
- Ragini & Mahesh
ಸುನೈನಾ ಮತ್ತು ತಂಡ ಆಯೋಜಿಸಿರುವ ಕನ್ನಡ ತರಗತಿ ತುಂಬಾ ಒಳ್ಳೆಯದು ಮತ್ತು ಮಕ್ಕಳು ನಮ್ಮ ಮಾತೃಭಾಷೆಯೊಂದಿಗೆ ಸಂಪರ್ಕ ಹೊಂದಲು ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.
ಇದನ್ನು ನಡೆಸುತ್ತಿರುವ ಅವರ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ. ಈ ತರಗತಿಗಳಿಗೆ ಸೇರಲು ಮತ್ತು ನಮ್ಮ ಭಾಷೆಯನ್ನು ಕಲಿಯಲು ತಮ್ಮ ಮಕ್ಕಳನ್ನು ದಾಖಲಿಸಲು ಪೋಷಕರನ್ನು ಶಿಫಾರಸು ಮಾಡುತ್ತೇವೆ.
-Netra & Chetan
."ಅಪ್ಪಾ! ಕನ್ನಡದಲ್ಲಿ ಮಾತಾಡು, Please!!! ಎಲ್ಲರೂ ಕೇಳ್ಸ್ಕೊತಾರೆ", ತಟ್ ಅಂತ ಬಂದ ಉತ್ತರಕ್ಕೆ ಕ್ಷಣ ಕಾಲಕ್ಕೆ ಸ್ತಬ್ದವಾಗಿ ನಿಂತ ನೆನಪು ಹಾಗೆ ಇದೆ.
"Absolutely no popsicles this month, Vivaan" ಎಂದು ಮೆಲ್ಲ ದನಿಯಲ್ಲಿ ಗಧರಿಸಿದಾಗ, Costco ಸುತ್ತು-ಮುತ್ತಲೆಲ್ಲ ಸೂಕ್ಷ್ಮವಾಗಿ ಕಣ್ಣು ಚಲ್ಲಿ, ಹಲ್ಲು ಕಡೆಯುತ್ತ ನನ್ನ ಎಂಟು ವರ್ಷದ ಮಗ 'ವಿವಾನ್' ಕೊಟ್ಟ ಉತ್ತರವಿದು. ಇಂತದೊಂದು ಮಗನ ಸಣ್ಣ ಕನ್ನಡ ಪ್ರತಿಭಟೆಯನ್ನು ಸಂತೋಷದಿಂದ ಅಹ್ಲಾಸಿದ ತಂದೆಯ ಟಿಪ್ಪಣಿ...
ಕಳೆದ ವರುಷ ಸ್ನೇಹಿತ 'ಮಹಾಂತೇಶ್ ಪರಶೆಟ್ಟಿ' ಕನ್ನಡ ಕಲಿ' Whatsapp groupಗೆ ಪರಿಚಯಿಸಿದಾಗ, ಮರು ಭೂಮಿಯಲ್ಲಿ ನೀರು ಕಂಡಂತೆ ಭಾಸವಾಗಿತ್ತು. ಮರುಕ್ಷಣದಲ್ಲೇ ಪಾಠವನ್ನು ಆರಂಭಿಸಿದ ವಿವಾನ್ - ಕನ್ನಡಕ್ಕೆ ತೀರಾ ಅಪರಿಚಿತನಲ್ಲವಾದರೂ, ಕನ್ನಡದಲ್ಲಿ ಒಂದೇ ಉಸಿರಿನಲ್ಲಿ ಸಂಭಾಷಣೆ ಬೆಳೆಸುವ ಗತಿಯಲ್ಲಿ ಕಂಡಿತಾ ಇರಲಿಲ್ಲ.
ಇಂದು, ಒಂದರಿಂದ - ನೂರಿನವರೆಗೂ ಎಣಿಸಿ, ಮಲಗುವ ಮುನ್ನ ಕನ್ನಡ-ಪಂಚತಂತ್ರದ ಕನಿಷ್ಠ ಒಂದು ಹಾಳೆಯನ್ನಾದರು ತಿರುಗಿಸಿ, ನಿಸ್ಸಂಕೋಚವಾಗಿ ಕನ್ನಡದಲ್ಲಿ ಮಾತನಾಡುವ ಗತಿಗೆ ಸರಾಗವಾಗಿ ಜಾರಿದ್ದಾನೆಂದರೆ ಅದೊಂದು ಆಶ್ಚರ್ಯವೇ ಸಹಿ.
ಇಂತದೊಂದು ಕಲಿಕೆಯ ಬೀಜವನ್ನು ತಾಯಿನಾಡಿನಿಂದ ಹೊತ್ತು ದೂರ ದೇಶದ Michigan ರಾಜ್ಯಕ್ಕೆ ತಂದು, ಬಿತ್ತಿ, ಪ್ರತಿಭಾನ್ವಿತ ತಂಡವನ್ನು ಕಟ್ಟಿ, ಶ್ರದ್ದೆಯಿಂದ ಲಾಲಿಸಿ-ಪೋಷಿಸಿ, "ಕನ್ನಡ ಕಲಿ" ಎಂಬ ಗುರುಕುಲವನ್ನು ಕಟ್ಟಿದ 'ಸುನೈನಾ ಗೌಡ' ಹಾಗು ತಂಡಕ್ಕೆ ನನ್ನಂತೆಯೇ ಕನ್ನಡದ ಪಲ್ಲಕಿಯನ್ನು ಮನದ ಮಂದರಿದಲ್ಲಿ ಪೂಜಿಸುವ ಎಲ್ಲ ತಂದೆ-ತಾಯಂದಿರ ವೃಂದದ ನಮನಗಳು.
ತಮ್ಮ ಜೀವನದ ಎಲ್ಲ ಪ್ರಮುಖ ಕಾರ್ಯವನ್ನು ಬದಿಗಿಟ್ಟು, computer ಮೂಲಕವೇ ವಾರಕ್ಕೊಮ್ಮೆ ಮನೆ-ಮನೆಗೆ ತೆರಳಿ, ಕನ್ನಡ ಅಕ್ಷರದ ಬಿಸಿ ಊಟವನ್ನು ಮಕ್ಕಳಿಗೆ ಹಂಚುವ, 'ಅಶ್ವಿನಿ ಸರಾಫ್; ಯವರಂತ ಎಲ್ಲ ಗುರುಗಳ ಉತ್ಸಾಹಕ್ಕೆ ವಂದನೆಗಳು.
ಇನ್ನುನನ್ನತೆಯೇ ನಿಮ್ಮ ಮಕ್ಕಳೊಂದಿಗೆ ನೀವೂ ಕನ್ನಡದಲ್ಲಿ ಒಂದು ಸಿಹಿ ಕಾಳಗ ಮಾಡುವಾಸೆಯಿದ್ದರೆ... ಬನ್ನಿ! 'ಕನ್ನಡ-ಕಲಿ'ಸೋನಾ.
- Rashmi & Abhishek Inchal
ನನ್ನ ಮಗ ಅಕ್ಷಜ್ ಕನ್ನಡ ಅಕಾಡೆಮಿಗೆ ಸೇರಿಕೊಂಡು ಸುಮಾರು 2 ವರ್ಷಗಳಾಗಿವೆ. ಮಕ್ಕಳಿಗೆ ಕನ್ನಡ ಕಲಿಸಲು, ಮಾತನಾಡಲು ಮತ್ತು ಬರೆಯಲು ಸ್ವಂತ ಮಾತೃಭಾಷೆ ಕಲಿಸುವ ಎಲ್ಲಾ ಶಿಕ್ಷಕರ ಪ್ರಯತ್ನವನ್ನು ಪ್ರಶಂಸನೀಯ. ತರಗತಿಯ ಬಗ್ಗೆ ಅಶ್ವಿನಿ ಅವರ ಬೋಧನಾ ವಿಧಾನದ ಬಗ್ಗೆ ವೈಯಕ್ತಿಕವಾಗಿ ತುಂಬಾ ಸಂತೋಷವಾಗಿದೆ ಮತ್ತು ಅವರು ಮಕ್ಕಳ ಸ್ನೇಹಿಯಾಗಿದ್ದರೆ. ನನ್ನ ಮಗ ಯಾವಾಗಲೂ ಇಂಗ್ಲಿಷ್ನಲ್ಲಿ ಪ್ರತಿಕ್ರಿಯಿಸುವ ಬದಲು ಮನೆಯಲ್ಲಿ ಕನ್ನಡದಲ್ಲಿ ಮಾತನಾಡಲು ಪ್ರಾರಂಭಿಸಿದ್ದಾನೆ. ಅವರು ಮಾತನಾಡುವಾಗ ಹೆಮ್ಮೆ ಮತ್ತು ಆತ್ಮವಿಶ್ವಾಸವನ್ನು ಅನುಭವಿಸುತ್ತಿದ್ದಾರೆ. ಕನ್ನಡ ಬರೆಯುವ ಬಗ್ಗೆ ಅವನಿಗೆ ಇನ್ನೂ ಸ್ವಲ್ಪ ಸುಧಾರಣೆ ಬೇಕು ಮತ್ತು ನಾವು ಅದರ ಮೇಲೆ ಕೆಲಸ ಮಾಡಬೇಕಾಗಿದೆ.
-Bharghavi and Nikil Joshi